Sri Rama Temple | ಶ್ರೀರಾಮ ದೇವಸ್ಥಾನ | ChunchanaKatte WaterfallS | ಚುಂಚನಕಟ್ಟೆ ಜಲಪಾತ | Journey Weblogಈ ಹಿಂದೆ ಈ ಸ್ಥಳವು ದಟ್ಟವಾದ ದೊಡ್ಡ ಕಾಡಿನ ಪ್ರದೇಶವಾಗಿತ್ತು. ದಂಡಕಾರಣ್ಯವೆಂದು ಹೇಳುತ್ತಾರೆ. ಈ ಜಾಗಕ್ಕೆ ತೃಣಬಿಂಧು ಮಹರ್ಷಿಗಳು ಬಂದಾಗ ಅವರಿಗೆ ಇಲ್ಲಿ ತಪಸ್ಸು ಮಾಡುವ ಇಚ್ಚೆಯಾಗುತ್ತದೆ. ಆದರೆ ಅವರಿಗೆ ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಕಾವೇರಿಯು ಕಾಣುವುದಿಲ್ಲ. ಸ್ನಾನ, ಜಪ, ಅನ್ನಿಕ ಗಳನ್ನು ನೆರೆವೇರಿಸಿಕೊಳ್ಳಲಿಕ್ಕೆ ಅವರಿಗೆ ನದಿ ತೀರ ಬೇಕಾಗಿತ್ತು. ಅದಕ್ಕಾಗಿ ಶ್ರೀಮನ್ ನಾರಾಯಣನನ್ನು ಕುರಿತು ತಪಸ್ಸು ಮಾಡುತ್ತಾರೆ. ಸಾವಿರಾರು ವರ್ಷಗಳ ಕಾಲ ಘೋರವಾದ ತಪ್ಪಸ್ಸಿನ ಫಲವಾಗಿ ಅವರಿಗೆ ಸ್ವಾಮಿ ಶ್ರೀಮನ್ ನಾರಾಯಣರು ಪ್ರತ್ಯೆಕ್ಷ ವಾಗುತ್ತಾರೆ. ಋಷಿಮುನಿಗಳ ಕೋರಿಕೆಯಂತೆ ಗುಪ್ತಗಾಮಿನಿ (ಯಾರಿಗು ಕಾಣದ ನದಿ ತೀರ) ಯನ್ನು ತೋರಿಸುತ್ತಾರೆ. ಹಾಗೆಯೇ ಋಷಿಮುನಿಗಳನ್ನು ಕುರಿತು ಈ ರೀತಿಯಾಗಿ ಹೇಳುತ್ತಾರೆ. ತ್ರೇತಾಯುಗದಲ್ಲಿ ರಾಮನ ಅವತಾರ ಎತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇತ್ಯಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಹೇಳಿ ಅಪ್ರತ್ಯೆಕ್ಷ ವಾಗುತ್ತಾರೆ. ಅಂದಿನಿಂದ ಗುಪ್ತಗಾಮಿನಿಯಲ್ಲಿ ಸ್ನಾನ, ಅನ್ನಿಕ, ಜಪಗಳನ್ನು ಮಾಡಿಕೊಂಡು ಇರುತ್ತಾರೆ. ಚುಂಚ, ಚುಂಚಿ ಎಂಬ ಬೇಡರ ಗಂಡಹೆಂಡರು ಇದೇ ಕಾಡಿನಲ್ಲಿ ವಾಸವಾಗಿರುತ್ತಾರೆ. ಅವರ ಕಸಬು ಇಲ್ಲಿಗೆ ಬರುವ ಜನರನ್ನು ಹೆದರಿಸಿ, ಬೆದರಿಸಿ, ಅವರಲ್ಲಿ ಇರುವ ಅಮೂಲ್ಯವಾದವುಗಳನ್ನು ಕಿತ್ತುಕೊಳ್ಳುವುದು ಅವರನ್ನು ಕೊಂದು ಅವರ ಮಾಂಸವನ್ನು ತಿನ್ನುವ ನರಭಕ್ಷಕರಾಗಿದ್ದರು. ಹೀಗೆ ಅವರು ಜೀವನ ನಡೆಸುತ್ತಿದ್ದರು. ತೃಣ ಮಹರ್ಷಿಗಳು ತಪಸ್ಸು ಮಾಡುತ್ತಿದ್ದ ಜಾಗಕ್ಕೆ ಬಂದಾಗ ಅವರನ್ನು ನೋಡಿದ ತಕ್ಷಣ ಅವರಿಗೆ ಶರಣಾಗುತ್ತಾರೆ. ಅವರ ಶಾಪ ವಿಮೋಚನ ಸಮಯ ಬಂದಿರುತ್ತದೆ. ಋಷಿಮುನಿಗಳನ್ನು ಕುರಿತು ಕೇಳುತ್ತಾರೆ. “ನಾವು ಮಾಡಬಾರದ ಪಾಪ ಹಿಂಸೆಗಳನ್ನು ಮಾಡಿದ್ದೇವೆ. ಆದರೆ ಈ ದಿನ ಇಲ್ಲಿಗೆ ಬಂದು ನಿಮಗೆ ಶರಣಾಗತರಾಗಲು ಏನೊ ಮಹತ್ತರವಾದ ಕಾರಣವಿರಬೇಕೆಂದು ” ಕೇಳುತ್ತಾರೆ. ಆಗ ತೃಣ ಮಹರ್ಷಿಗಳು ಹೇಳುತ್ತಾರೆ. “ ಹಿಂದೆ ನೀವು ಕಾಶಿ ದೇಶದಲ್ಲಿ ಬ್ರಾಹ್ಮಣ ದಂಪತಿಗಳಾಗಿದ್ದಿರಿ. ನೀವು ಅಮವಾಸ್ಯ ದಿವಸ ಅಭ್ಯಂಜನ ಸ್ನಾನ ( ಎಣ್ಣೇ ನೀರಿನ) ಮಾಡಿದ್ದಕ್ಕಾಗಿ ಈ ತೆರನಾದ ಶಾಪ ಬಂದಿತ್ತು. ಈ ಶಾಪ ವಿಮೋಚನೆಗೆ ಕಾರಣವೇನೆಂದರೇ ಒಬ್ಬ ಬಡವ ನಿಮ್ಮ ಬಳಿಗೆ ಬಂದು ಅಡುಗೆ ಮಾಡಿಕೊಳ್ಳಲು ಸ್ವಲ್ಪ ಸ್ಥಳ ಕೇಳುತ್ತಾನೆ. ಅದಕ್ಕೆ ನೀವು ಒಪ್ಪುತ್ತೀರಿ. ಈ ಕಾರಣಕ್ಕಾಗಿ ನಿಮ್ಮ ಶಾಪ ವಿಮೋಚನೆಗೆ ದಾರಿಯಾಯಿತು ” ಎಂದು ಹೇಳುತ್ತಾರೆ. ಇನ್ನುಮುಂದೆ ನಿಮ್ಮಿಂದ ಈ ಕ್ಷೇತ್ರಕ್ಕೆ ತುಂಬಾ ಕೆಲಸಗಳು ನೆರವೇರುತ್ತವೆ. ಈ ಕ್ಷೇತ್ರಕ್ಕೆ ನಿಮ್ಮಗಳ ಹೆಸರು ಬರುತ್ತದೆ. ಎಂದು ಹೇಳುತ್ತಾರೆ. ಅಂತೆಯೇ ಈ ಕಾಲದಲ್ಲಿ ಚುಂಚನಕಟ್ಟೆ ಎಂದು ಪ್ರಸಿದ್ದಿಯಾಗಿದೆ. ತ್ರೇತಾಯುಗದಲ್ಲಿ ಶ್ರೀರಾಮರು ರಾವಣನನ್ನು ಸಂಹಾರ ಮಾಡಿ ಈ ಕ್ಷೇತ್ರಕ್ಕೆ ಬಂದಾಗ ಲಕ್ಷ್ಮಣ ಸ್ವಾಮಿಗೆ ಧನುಷ್ಟೋಟಿ ಬಾಣವನ್ನು ಬಿಟ್ಟು ಬಂಡೆಯನ್ನು ಒಡೆಯಲು ಹೇಳುತ್ತಾರೆ. ಅಂತೆಯೇ ಹೊಡೆದ ತಕ್ಷಣ ಬಂಡೆ ಚೂರಾಗಿ ಒಡೆದು ಕಾವೇರಿ ಉಕ್ಕಿ ಹರಿಯುತ್ತಾಳೆ. ಈ ಶಬ್ದವನ್ನು ಕೇಳಲು ಸ್ವಾಮಿಗೆ ಆಗುವುದಿಲ್ಲ. ಆಗ ಹೇಳುತ್ತಾರೆ “ಹೆಣ್ಣಿಗೆ ಇಷ್ಟೊಂದು ನಾಲಿಗೆ ಇರಬಾರದು” ಎಂದು ಉದ್ದರಿಸುತ್ತಾರೆ ಶಾಪ ಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ಈಗಲೂ ಸಹ ಒಳಗೆ ದೇವರ ಸನ್ನಿದಿ ಗರ್ಭಗುಡಿಯಲ್ಲಿ ಕಾವೇರಿ ಭೋರ್ಗರೆಯುವ ಶಬ್ದ ಕೇಳಿಸುವುದಿಲ್ಲ. ಅಲ್ಲಿ ಅಭಿಷೇಕದ ನೀರು ಹೊರಗಡೆ ಹೋಗಲು ಒಂದು ಸೋಮರಂಧ್ರ ಇರುತ್ತದೆ. ಆದರೂ ಶಬ್ದ ಒಳಗೆ ಬರುವುದಿಲ್ಲ, ಹೀಗೆ ಒಂದು ನಂಬಿಕೆ ಇದೆ. ನಿಶಬ್ದವಾದ ಸಮಯದಲ್ಲಿ ಈ ಭೋರ್ಗರೆಯುವ ಶಬ್ದ 10 ಮೈಲಿಗೆ ಕೇಳಿಸುತ್ತದೆ. ಆದರೆ ಇದೊಂದು ಪವಾಡವೇ ಸರಿ. ತಾಯಿ ಸೀತಾಮತೆ ಸ್ನಾನ ಮಾಡಿದ ಸ್ಥಳದಲ್ಲಿ ಈಗಲೂ ಸಹಾ ಎಣ್ಣೆ, ಸೀಗಾಕಾಯಿ (ನೊರೆಯ ರೂಪದಲ್ಲಿ) ಮತ್ತು ಅರಿಶಿಣ, ಕುಂಕುಮ ಬೆರತ ನೀರನ್ನು ಭಕ್ತಿಯಿಂದ ನೋಡಿದರೆ ಈಗಲೂ ಕಾಣಬಹುದು ಎಂದು ಪ್ರತೀತಿ ಇದೆ. ಇದನ್ನು ಈ ಧನಷ್ಕೋಟಿ ಜಾಗದಲ್ಲಿ ನೋಡಬಹದು. ಹೀಗೆ ಒಂದು ಬಾರಿ ಸೀತಾಮಾತೆ ಸ್ನಾನ ಮಾಡುತ್ತಿರುವಾಗ ಲಕ್ಷ್ಮಣ ಸ್ವಾಮಿ ಸೀತಾಮಾತೆಯನ್ನು ಯಾವುದೇ ಒಂದು ತರಹದ ದೃಷ್ಟಿಯಿಂದ ನೋಡುತ್ತಾರೆ. ಆಗ ಸೀತಾಮಾತೆಯು ನಾಚಿ ಕೋಪದಿಂದ ಜಲವಾಗಿ ಬಂದು ಈ ಜಾಗದಿಂದ ಹರಿಯುತ್ತಾಳೆ. ಹೀಗೆ ಹರಿಯುವಾಗ ಒಂದು ಬಂಡೆಗೆ ತಾಕಿ ಆ ಬಂಡೆ ಇಬ್ಬಾಗವಾಗುತ್ತದೆ. ಈ ಜಾಗಕ್ಕೆ ಸೀತಾಮಡಿಲು ಅಥವಾ ಸೀತಾಬಚ್ಚಲು ಎಂದು ಕರೆಯುತ್ತಾರೆ. ಲಕ್ಷ್ಮಣ ಸ್ವಾಮಿಯು ಬಾಣ ಬಿಟ್ಟ ಕಾವೇರಿ ಭೋರ್ಗರೆದ ಜಾಗಕ್ಕೆ ಧನುಷ್ಕೋಟಿ ಎಂದು ಕರೆಯುತ್ತಾರೆ. ತೃಣಬಿಂದು ಮಹರ್ಷಿಗಳು ಸೀತಾಮಾತೆಯಲ್ಲಿ ಕೇಳಿಕೊಳ್ಳುತ್ತಾರೆ. ಎಲ್ಲಾ ಕಡೆಗಳಲ್ಲಿ ನಿನ್ನನ್ನು ಶ್ರೀರಾಮರ ಎಡಗಡೆ ನಿಂತು ದರ್ಶನ ಪಡೆದಿದ್ದೇನೆ ನೀನು ನನಗೆ ಶ್ರೀರಾಮರ ಬಲಗಡೆ ನಿಂತು ದರ್ಶನ ಕೊಡುವಂತೆ ಕೋರಿಕೊಳ್ಳುತ್ತಾರೆ. ಅಂತೆಯೇ ಈ ಸ್ಥಳದಲ್ಲಿ ಮೂಲ ಮೂರ್ತಿಯು ಶ್ರೀರಾಮರ ಬಲಭಾಗದಲ್ಲಿ ಸೀತಾಮಾತೆಯನ್ನು ಕಾಣಬಹುದು ಇದು ಇಲ್ಲಿನ ಮೂಲ ಮೂರ್ತಿಯ ಒಂದು ವಿಶೇಷ. ಹೀಗೆ ತೃಣ ಮಹರ್ಷಿಗಳು ಶ್ರೀರಾಮರನ್ನು ಪ್ರತಿಸ್ಥಾಪಿಸಿದ್ದಾರೆ. ಎಂದು ಪ್ರತೀತಿ ಇದಕ್ಕೆ ಪುರಾವೆ ಸಿಗುವುದಿಲ್ಲ.
#SRIRAMA #chunchanakattefalls #chunchanakattevideo #chunchanakattejatre #chunchanakatteram , chunchankatte temple, chunchnakatte falls mysore , chunchanakatte danagala jatre, chunchanakatte, chunchanakatta sri ram temple, chunchanakatte 2020, Like observe my Fb web page
https://www.fb.com/rvmedia007/

Watch my video’s

Shri Kappadi kshetra Info

Mantralaya journey vlog Mysore to Mantralaya journey video

#sriramamandira

#seetha
#chunchanakatteramatemple

Mysore Bangalore highway building video driving suggestions

source